Hari: Paratara:

Animation

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೊ ಮಹಾರಾಯ
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ
ನಿನ್ನದೇ ಸಕಲ ಸಂಪತ್ತು

If God brings you to it, He will bring you through it.
Happy moments, praise God.
Difficult moments, seek God.
Quiet moments, worship God.
Painful moments, trust God.

Every moment, thank God

madhwasangha

Sri Hari is Supreme , This world is true, there is a difference between each and every living entity in this world, all the living entities are dependent on Sri hari, Ultimate joy lies in the Mukti and mukti can be attained by gaining Bhakti. Pratyaksha (Direct observation), Anumana (Prediction) and Agama (Vedas) are indeed the real Evidence. Hari is to be perceived in His nature through the Holy Scriptures and only through them.

Saturday, July 16, 2011

Ninna Olumeinda nikhila janaru

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು I
ಮನ್ನಿಸುವರೊ ಮಹಾರಾಯ IIಪII


ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ I

ನಿನ್ನದೇ ಸಕಲ ಸಂಪತ್ತು II ಅಪ II
shreerayarublogspot.com
ಜೀರ್ಣಮಲಿನ ವಸ್ತ್ರ ಕಾಣದ ಮನುಜಗೆ Iಊರ್ಣ ವಿಚಿತ್ರ

ವಸನಾ II ವರ್ಣವರ್ಣದಿಂದ ಬಾಹೋದೇನೊ ಸಂ -Iಪೂರ್ಣ

ಗುಣಾರ್ಣವ ದೇವಾ II1II


ಸಂಜೀತನಕ ಇದ್ದು ಸಣ್ಣ ಸವಟು ತುಂಬ I ಗಂಜಿ ಕಾಣದೆ I
ಬಳಲಿ -ದೆನೊ II ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ
ಭುಂಜಿಸುವದು ಮತ್ತೇನೋ II2II

ಒಬ್ಬ ಹೆಂಗಸಿಗೆ ಅನ್ನ ಹಾಕುವದಕ್ಕೆ I ತಬ್ಬಿಬ್ಬುಗೊಂಡೆ ನಾ ಹಿಂದೆ I
ನಿಬ್ಬರದಲಿ ಸರ್ವರ ಕೂಡಿನ್ನು Iಹಬ್ಬವನುಂಡೆನೊ ಹರಿಯೇ II3II

ಮನೆಮನೆ ತಿರುಗಿದೆ ಕಾಸುಪುಟ್ಟದೆ I ಸುಮ್ಮನೆ ಚಾಲವರಿದು
ಬಾಹೆನೊ II ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ Iಎನಗೆ ಪ್ರಾಪುತಿ
ನೋಡೋ ಜೀಯಾ II4II

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ Iಮೆದ್ದೆನೆಂದರೆ
ಈಯದಾದೆ II ಈ ಧರೆಯೊಳು ಸತ್ಪಾತ್ರರಿಗುಣಿಸುವ I ಪದ್ಧತಿ ನೋಡೊ
ಧರ್ಮಾತ್ಮಾ II5II

ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ I ಚಾಚಿದೆ ನೊಸಲು
ಹಸ್ತಗಳ II ಯೋಚಿಸಿ ನೋಡಲು ಸೋಜಿಗವಾಗಿದೆ I ವಾಚಕೆ ನಿಲುಕದೊ
ಹರಿಯೇ II6II

ವೈದಿಕ ಪದವಿಯ ಕೊಡುವನಿಗೆ ಲೌಕಿಕ Iನೈದಿಸುವುದು
ಮಹಾಖ್ಯಾತಿ II ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ I ಪಾದ
ಸಾಕ್ಷಿ ಅನುಭವವೊ
II7II

No comments:

Post a Comment